skip to content

ಮಹಾಭಾರತ

ಮಾಹಿತಿ

ಮಹಾಭಾರತ ಭಾರತದ ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದು. ಇದು ಹಿಂದೂ ಧರ್ಮದ ಒಂದು ಮುಖ್ಯ ಪಠ್ಯವೂ ಹೌದು. ವಿಶ್ವ ಸಾಹಿತ್ಯದ ಸಾಧನೆಗಳಲ್ಲಿ ಒಂದೆಂದು ಪರಿಗಣಿತವಾಗಿರುವ ಮಹಾಭಾರತ ಭಾರತೀಯ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಸಂಪೂರ್ಣ ಮಹಾಭಾರತ ಒಂದು ಲಕ್ಷಕ್ಕೂ ಹೆಚ್ಚು ಶ್ಲೋಕಗಳನ್ನು ಒಳಗೊಂಡಿದ್ದು ಗ್ರೀಕ್ ನ ಜನಪದ ಮಹಾಕಾವ್ಯಗಳಾದ ಇಲಿಯಡ್ ಮತ್ತು ಒಡಿಸ್ಸಿ - ಎರಡನ್ನೂ ಸೇರಿಸಿದರೂ ಮಹಾಭಾರತದ ಏಳನೇ ಒಂದು ಭಾಗದಷ್ಟು ಮಾತ್ರ ಆಗುತ್ತದೆ. ಮಹಾಭಾರತ 18ಪರ್ವ ಮತ್ತು 1ಲಕ್ಷ ಶ್ಲೋಕಗಳನ್ನು ಒಳಗೊಂಡ ಅದ್ಭುತ ಮಹಾಕಾವ್ಯವಾಗಿದೆ. ಮಹಾಭಾರತವು ವ್ಯಾಸ ಮುನಿಶ್ರೇಷ್ಠರಿಂದ ಮೂಲವಾಗಿ ರಚಿಸಲ್ಪಟ್ಟಿದೆ; ಎಂದು ನಂಬಲಾಗಿದೆ. ಮಹಾಭಾರತವನ್ನು ಪಂಚಮವೇದವೆಂದು ಕರೆಯಲಾಗಿದೆ. ಶ್ರೀ ಕೃಷ್ಣನಿಂದ ಪಾರ್ಥನಾದ ಅರ್ಜುನನಿಗೆ ಉಪದೇಶಿಸಲ್ಪಟ್ಟ ಮಹಿಮಾನ್ವಿತವಾದ ಭಗವದ್ಗೀತೆ ಯನ್ನು ಮಹಾಭಾರತದ ಆತ್ಮ (ಅಂತರಾತ್ಮ) ಎನ್ನಲಾಗಿದೆ.

ಮಹಾಭಾರತ (Mahabharatha)

ಈಗ ರಾಮಾಯಣ ಮತ್ತು ಮಹಾಭಾರತವನ್ನು ಕೇವಲ ಒಂದು ಡಾಲರ್ ನಲ್ಲಿ ಕಲಿಯಿರಿ

ರಾಮಾಯಣ ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಮುಖ್ಯವಾದುದು. ಈ ಬೃಹದ್ಕಾವ್ಯವು ವಾಲ್ಮೀಕಿ ಮಹರ್ಷಿಗಳಿಂದ ರಚಿಸಲ್ಪಟ್ಟಿದೆ. ರಾಮಾಯಣವನ್ನು ತತ್ಪುರುಷ ಸಮಾಸವಾಗಿ ವಿಭಜಿಸಿದರೆ (ರಾಮನ+ಅಯನ=ರಾಮಾಯಣ) “ರಾಮನ ಕಥೆ” ಎಂಬ ಅರ್ಥ ಬರುತ್ತದೆ. ರಾಮಾಯಣವು ೨೪೦೦೦ ಶ್ಲೋಕಗಳಿಂದುಂಟಾದ ೭ ಕಾಂಡಗಳಿಂದ ಕೂಡಿದೆ. ರಾಮಾಯಣದ ಕಥೆಯು ಮುಖ್ಯವಾಗಿ ಅಯೋಧ್ಯೆಯ ಸೂರ್ಯವಂಶದ ರಾಜಪುತ್ರ ರಾಮ, ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರ ಕುರಿತಾಗಿದೆ.

ಲೇಖಕ ಪರಿಚಯ

ಪ್ರಜ್ಞಾಪೂರ್ವಕವಾಗಿ ಸಂತೋಷವಾಗಿರಲು ರಾಮಾಯಣ ಮತ್ತು ಮಹಾಭಾರತ ಕಲಿಯಿರಿ ಮತ್ತು ಕಲಿಸಿರಿ